ಮೆಗಾರಾಪಂಥ -
ಈ ಪಂಥದ ದಾರ್ಶನಿಕರನ್ನು ಅಪೂರ್ಣ ಸಾಕ್ರೆಟಿಕರು ಎನ್ನಲಾಗಿದೆ. ಇವರಲ್ಲಿ ಪ್ರಮುಖನಾದವ ಮೆಗಾರದ ಯೂಕ್ಲಿಡ್, ಉಳಿದವರು ಇವನಷ್ಟು ಪ್ರಸಿದ್ಧರಲ್ಲ. ಈ ಪಂಥದ ಮತ್ತೊಬ್ಬ ಸಿಲ್ಪೋ. ಈ ಪಂಥದವರು ಸಾಕ್ರೆಟಿಸ್‍ನ ಮತಿಜ್ಞಾನಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟರು. ಈ ಮತಿಯನ್ನು ತರ್ಕದಿಂದ ಪಡೆಯಬಹುದೆಂದು ಭಾವಿಸಿದರು. ಈ ಮತಿಯನ್ನೇ ಜ್ಞಾನವೆಂದು ಅದೇ ಧರ್ಮವೆಂದೂ ಬಗೆದರು. ಈ ಪಂಥ ಅಲ್ಪಕಾಲ ಮಾತ್ರ ಉಳಿದಿದ್ದು ನಂಬಲಾರದ ಜ್ಞಾನವೆಂದು ಹಳಿದರು. ಇದನ್ನು ಸಮರ್ಥಿಸಲು ತರ್ಕವಿತರ್ಕದಲ್ಲಿ ತೊಡಗಿದರು. ಸಾಕ್ರೆಟಿಸನನ್ನು ಪೂರ್ಣವಾಗಿ ಅನುಸರಿಸದ ಕಾರಣ ಇವನನ್ನು ಅಪೂರ್ಣ ಸಾಕ್ರೆಟಿಕರು ಎಂದು ಕರೆದರು. ಈ ಅಪೂರ್ಣತೆಯನ್ನು ಪೂರ್ಣಗೊಳಿಸಿದ ಪ್ಲೇಟೋ ಇವರಿಂದ ಬಲು ಮುಂದೆ ಹೋದ.				
(ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ